Thursday, 30 July 2020

ಘಟಕ ಯೋಜನೆ

ಮಕ್ಕಳೊಂದಿಗಿನ ಸಂಭಾಷಣೆ


 ನಮ್ಮ ಶಾಲೆಯ ಮಕ್ಕಳೊಂದಿಗೆ ಈ ರಜೆ ಅವದಿಯಲ್ಲ ಕರೋನ ಮುಂಜಾಗ್ರತಿ ಮತ್ತು ಮಕ್ಕಳಿ ಮನೆಯಲ್ಲಿ ಕಲಿಕೆಯಗೆ ಸಂಬಧಿಸಿದ ವಿಷಯ ಚರ್ಚಿಸಲಾಯಿತು.

ವೀಡಿಯೊಗಳ ವಿಕ್ಷಣೆ

 Covid-19 ಹಾವಳಿಯ ಈ ಸಂದರ್ಭದಲ್ಲಿ ವ್ಯರ್ಥ ಕಾಲ ಕಳೆಯದೆ ಶೀಯುತ ಮುದೋಳ ಸರ್ ಮಾರ್ಗದರ್ಶನದಲ್ಲಿ "ಪ್ರಯೋಗ ಧರ್ಪಣ" ಪುಸ್ತಕ ರಚನೆಯ ಜೊತೆ ಪ್ರತೀ ಪ್ರಯೋಗಕ್ಕೆ ನಾವೇ video ಮಾಡಿ YouTube ಗೆ ಹಾಕಿದ್ದೇವೆ . ಕಲಬುರ್ಗಿ ಉತ್ತರ ವಲಯದ TLC ಯಲ್ಲಿ ನಾನು, ಶ್ರೀ ಪ್ರವೀಣ ಸರ್,ಶ್ರೀ ಮಲ್ಲಿಕಾರ್ಜುನ ಸರ್,ಶ್ರೀ ರಾಘವೇಂದ್ರ ಸರ್, ಶ್ರೀ ಪ್ರಶಾಂತ ಸರ್ ಅನೇಕ video ಗಳನ್ನು ಮಾಡಿದ್ದೇವೆ ಅವುಗಳಲ್ಲಿ ಕೆಲವು ಇಂತಿವೆ.

೧- ಆವೀಕರಣ 
೨- ನೀರಿನಶುದ್ದೀಕರಣ
೩-ಮರಭೂಮಿ ಸಸ್ಯಗಳ ಹೊಂದಾಣಿಕೆ
೪-ದೂರದ ಅಳತೆಯ ಆದರ್ಶಮಾನ 
೫-ಪಿಷ್ಟ ಪರೀಕ್ಷೆ
೬-ಕಾದ ಗಾಳಿ ಹಗುರವಾಗುತ್ತದೆ
೭-ಬೆಳಕು ಸರಳ ರೇಖೆಯಲ್ಲಿ ಚಲಿಸುತ್ತದೆ
೮-.ಲಿಪಿಡ್ ಪರೀಕ್ಷೆ
೯-ಪೋಟೀನ್ ಪರೀಕ್ಷೆ
೧೦-ಸರಳ ವಿದ್ಯುತ್ ಮಂಡಲ

#ಮೃತ್ಯುಂಜಯ.ರಾ.ಹಿರೇಮಠ 

ಕಲಿಕೋಪಕರಣಗಳು

    
 ಕಲಿಕೋಪಕರಣಗಳಿಲ್ಲದ ಕಲಿಕಾ ಪ್ರಕ್ರಿಯೆ ಉಪ್ಪು ಇಲ್ಲದ ಅಡಿಗೆಯಂತೆ. ಕಲಿಕೋಪಕಣಗಳು ಮಾಡಿ ಕಲಿ ಎಂಬ ತತ್ವದನ್ವಯ ಮಕ್ಕಳ ಕಲಿಕೆಯನ್ನು ಶಾಶ್ವತ ಗೊಳಿಸುತ್ತವೆ. "Work from home " ಸುಸಂದರ್ಭದಲ್ಲಿ ನಾವು ಮಾಡಿದ ಕೆಲವು ಉಪಕರಣಗಳು ಈ ಕೆಳಗಿನಂತಿವೆ.

೧- ಕಸದಿಂದ ರಸ 

೨- ರಾಕೆಟ್ ಮಾದರಿ
 
೩- ಘನಾಕೃತಿಗಳು

೪- ಜೀಯೋಬೊರ್ಡ

೫- ಬಹುರೂಪದರ್ಷಕ

೬- ಬೆಳಕು ಸರಳರೇಖೆಯಲ್ಲಿ ಚಲಿಸುತ್ತದೆ

೭- ರೋಮನ್ ಸಂಖ್ಯೆ ಚ್ಯಾರ್ಟ್

೮-ಸೂಜಿ ರಂದ್ರ ಕ್ಯಾಮರಾ

೯-ಸಮತಲಾಕೃತಿಗಳು

೧೦- ಗಣಿತದ ಚ್ಯಾರ್ಟಗಳು.


#ಮೃತ್ಯುಂಜಯ. ಹಿರೇಮಠ 

ಸೇತುಭಂದ













Tuesday, 28 July 2020

" ನಾವು ಚಿತ್ರೀಕರಣ ಮಾಡಿದ video "

         ಮಕ್ಕಳ ಕಲಿಕೆಗೆ ನೆರವಾಗುವಂತೆ ಶೀಯುತ ಚೆನ್ನಬಸಪ್ಪ. ಮುದೋಳ ಸರ್ ಅಪರ ಆಯುಕ್ತರ ಕಾರ್ಯಾಲಯ ರವರ ಮಾರ್ಗದರ್ಶನದಲ್ಲಿ " ವಿಜ್ಞಾನ ದರ್ಪಣ " ಎಂಬ ಪುಸ್ತಕ ತಯಾರಿಸುವ ಕಾರ್ಯ ಪೂರ್ಣಗೊಂಡಿದ್ದು. ಅದರಲ್ಲಿನ ಪ್ರತೀ ಪ್ರಯೋಗಕ್ಕೆ video ಮಾಡು ಕಾರ್ಯ ನಡೆದಿದೆ. 

          ಈ ಕಾರ್ಯದಲ್ಲಿ ಸುಮಾರು ಎಂಟು ಜನ ಶಿಕ್ಷಕರ ತಂಡ ಕಾರ್ಯ ನಿರ್ವಹಿಸುತ್ತಿದೆ. ಇದರಲ್ಲಿ ನಾವು ಸಹ ಒಬ್ಬನಾಗಿದ್ದು ಅನೇಕ video ಮಾಡಿ YouTube ನಲ್ಲಿ ಹಾಕಲಾಗಿದೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.

೧- ಅಳತೆ ಆದರ್ಶಮಾನ

೨- ಆವೀಕರಣ

೩- ಗೋಲ &ಗೂಳಿ ಕೀಲುಗಳು

೪- ಪಾರದರ್ಶಕ & ಅಪಾರದರ್ಶಕ ವಸ್ತುಗಳು

೫- ಬೆಳಕಿನ ವಕ್ರೀಭವನ

೬- ವಸ್ತುಗಳ ಬೇರ್ಪಡಿಸುವಿಕೆ .

೭- ಬೌತ ಬದಲಾವಣೆ & ರಾಸಾಯನಿಕ ಬದಲಾವಣೆ
  
          ಹೀಗೆ  ಅನೇಕ video ಮಾಡಲಾಗಿದೆ ಅವುಗಳಲ್ಲಿ ಕೆಲವನ್ನು ನನ್ನ YouTube ಚನಲ್ ಗೆ ಹಾಕಲಾಗಿದೆ . ಎಂಟು ಜನ ಮಾಡಿದ video  ಗಳಿಗೆ link ಮಾಡಿ ಎಲ್ಲರೂ ವೀಕ್ಷಣೆಗೆ ಅನುಕೂಲ. ಮಾಡಲಾಗಿದೆ. ಇದರಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಶ್ರೀಯುತ ಮುದೋಳ ಸರ್ ಗೆ ಅನಂತ ವಂದನೆಗಳು & ನಮ್ಮ ತಂಡದ ಎಲ್ಲರಿಗೂ ವಂದನೆಗಳು. 

#  ಮೃತ್ಯುಂಜಯ. ರಾ. ಹಿರೇಮಠ. 

Venkatabenur sci activities


Sunday, 26 July 2020

ಆವೀಕರಣ


ಕ್ವಿಜ್ ಬ್ಯಾಂಕ





" ಸಹೋದ್ಯೋಗಿಗಳ ಜೊತೆಗಿನ ಸಂಭಾಷಣೆ "

       ಕರೋನ ಮಾಹಾಮಾರಿಯ ಹಾವಳಿ ಇಂತಹ ಸಂದರ್ಭದಲ್ಲಿ .ನಮ್ಮ ಶಾಲೆಯ ಸಹ ಶಿಕ್ಷರ ಜೊತೆ ಶೈಕ್ಷಣಿಕ ವಿಷಯಗಳ ಬಗೆಗೆ ಚರ್ಚಿಸಲು ಅಷ್ಟೊಂದು ಅವಕಾಶ ಸಿಗದಿರುವ ಸಂದರ್ಭದಲ್ಲಿ. ನಮ್ಮ ಶಾಲೆಯ ಶಿಕ್ಷಕರೊಂದಿಗೆ ಶಾಲೆ & ನಮ್ಮ ವೃತ್ತಿ ಬದುಕಿನ ಬಗ್ಗೆ ಫೋನ್ ಮೂಲಕ ಚರ್ಚಿಸಿ ಅನೇಕ ಮಾಹಿತಿ ಒಬ್ಬರನ್ನೊಬ್ಬರು ಹಂಚಿಕೊಳ್ಳಲಾಯಿತು.
    ನಮ್ಮ ಶಾಲೆಯ ಮುಖ್ಯಗುರುಗಳಾದ ಶ್ರೀ ಸಂಗಯ್ಯಾ ರವರ ಜೊತೆ 6,7,8 ನೇ ತರಗತಿಯ ಕೋಣೆಯಲ್ಲಿ computer ಅಳವಡಿಸುವ ಕುರಿತು ಚರ್ಚಿಸಲಾಯಿತು.ಅದರ ಜೊತೆ work from home ಬಗೆಗೆ, ಸೇತುಭಂದ ಪರೀಕ್ಷೆ ತಯಾರಿಯ ಬಗ್ಗೆ ಚರ್ಚಿಸಲಾಹಿತು.
           ನಲಿಕಲಿ ವರ್ಗ ನಿರ್ವಹಿಸುತ್ತಿರುವ ಶ್ರೀ ರಮೇಶ ಸರ್ ಮತ್ತು ಶ್ರೀಮತಿ ಗಂಗಾ ರವರ ಜೊತೆ ನಲಿಕಲಿ ವರ್ಗಕೋಣೆಯಲ್ಲಿ ಒಂದು TV ಕುಡಿಸುವ ಕುರಿತು ಮತ್ತು ಅದಕ್ಕೆ ಬೇಕಾಗುವ ಅನುದಾನವನ್ನು ಸಾರ್ವಜನಿಕರಿಂದ ,ಶಿಕ್ಷಣ ಪ್ರೇಮಿಗಳಿಂದ ಸಂಗ್ರಹಿಸುವ ಕುರಿತು ಚರ್ಚಿಸಲಾಯಿತು .ಶ್ರೀ ವೀರಣ್ಣ ವಿಶ್ವಕರ್ಮ ರವರು ಸಾವಿರ ರೂ ನೀಡಿರುವ ಮಾಹಿತಿ ಹಂಚಿಕೊಳ್ಳುಲಾಯಿತು.
        ಶ್ರೀಮತಿ ವಿಜಯಲಕ್ಷ್ಮೀ ಸ ಶಿ ರವರ ಜೊತೆ   online ತರಬೇತಿ, ಮತ್ತು ಅದರಲ್ಲಿ ಭಾಗವಹಿಸುವ ವಿಧಾನದ ಬಗೆಗೆ ಚರ್ಚಿಸಲಾಯಿತು ಬ್ಲಾಗ್ ತಯಾರಿಸುವ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು.

      ಶ್ರೀ ಭೀಮಾಶಂಕರ ಬಾಬಾ ರವರ ಜೊತೆ ಸಮಾಜ ವಿಜ್ಞಾನಕ್ಕೆ ಸಂಬಂದಿಸಿದ ಇರುವ ಕಲಿಕೋಪಕರಣಗಳು, ಚಾರ್ಟ್ ಗಳು &ಅವುಗಳ ಬಳಕೆ ಬಗೆಗೆ ಚರ್ಚಿಸಲಾಯಿತು. ಇದರ ಜೊತೆ ಗ್ರಂಥಾಲಯದ ಬಗ್ಗೆ ಈ ಶೈಕ್ಷಣಿಕ ವರ್ಷದಿಂದ ಏನೆಲ್ಲಾ ಹೊಸತನ ಮಾಡಬೇಕು ಎನ್ನುವುದರ ಬಗೆಗೆ ಚರ್ಚಿಸಲಾಯಿತು.

# ಮೃತ್ಯುಂಜಯ. ರಾ.ಹಿರೇಮಠ 

Saturday, 25 July 2020

" work from home" ಉಪಯೋಗಗಳು

       2020-21 ನೇ ಸಾಲಿನಲ್ಲಿ covid-19 ಪರಿಣಾಮ ಶಾಲೆಗಳನ್ನು ಬೇಗ ರಜೆ ಕೊಡಲಾಯಿತು & ಇನ್ನೂ ಶಾಲೆ ಪ್ರಾರಂಭವಾಗದಿರುವುದು ಬೋಧನೆ &ಕಲಿಕಾ ಪ್ರಕ್ರಿಯೆಗೆ ತೊಂದರೆ ಉಂಟಾಯಿತು. ಈ ಮಧ್ಯ ಇಲಾಖೆ work from home. ಎಂದು ಅನೇಕ ಕಾರ್ಯ ನೀಡಿತ್ತು ಅವುಗಳಿಂದ ಅನೇಕ ಅಂಶ ಕಲಿಯುವಂತಾಯಿತು. ಅದರಲ್ಲಿಯೂ ನಾನು ಕಳೆದ ಮಾರ್ಚನಿಂದ ಇಲಾಖೆ ವಹಿಸಿಕೊಟ್ಟ ಕಾರ್ಯಗಳಿಂದ ನನ್ನ ವೃತ್ತಿ ಬದುಕಿನಲ್ಲಿ ಹೊಸ ಹೊಸ ಅಂಶಗಳನ್ನು ಕಲಿಯುವಂತಾಯಿತು.ಅವುಗಳಲ್ಲಿ ನಾ ನಿರ್ವಹಿಸಿರುವ ಕಾರ್ಯಗಳು

೧-ಮುಖ್ಯಗುರುಗಳ online ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದು.

೨- ಅಪರ ಆಯುಕ್ತ ಕಾರ್ಯಲಯದಿಂದ " ಪ್ರಯೋಗ ದರ್ಪಣ" ಪುಸ್ತಕ ರಚನೆಯ ಕಾರ್ಯ, 4 ರಿಂದ 8 ತರಗತಿಯ ವಿಜ್ಞಾನ ಪ್ರಯೋಗಗಳ ಪುಸ್ತಕ ರಚನೆ.

೩-6ರಿಂದ 8 ತರಗತಿಯ ವಿಜ್ಞಾನ ವಿಷಯದ ವಿಭಾಗ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಲು ಸಿಕ್ಕ ಅವಕಾಶ

೪- ವಲಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯವನ್ನು ನಿರ್ವಹಿಸಲು ಸಿಕ್ಕ ಅವಕಾಶ.

೫- ಸೇಡಂ ವಲಯದಲ್ಲಿ ವಿಶೇಷ ಉಪನ್ಯಾಸಕನಾಗಿ ಒಂದು ಘಟಕ online ತರಬೇತಿ ನೀಡಿದ್ದು .

         ಹೀಗೆ ಹಲವಾರು online ತರಬೇತಿಯಲ್ಲಿ ಬಾಗಿಯಾಗಿ ಇಲಾಖೆ ನೀಡಿದ ಕಾರ್ಯ ನಿರ್ವಹಿಸಿ ನನ್ನ ವೃತ್ತಿ ಕೌಶಲ್ಯ ಅಭಿವೃದ್ಧಿ ಮಾಡಿಕೊಳ್ಳಲು ತುಂಬಾ ನೇರವಾಯಿತು. ಈ" work from home " ನಿಂದ ನನಗೆ ತುಂಬಾ  ಅನುಕೂಲವಾಗಿದೆ ಅದರಿಂದ covid-19 ಅಪಾಯದಿಂದ ನಮ್ಮನ್ನು ನಾವು ರಕ್ಷಿಸಿಕೊಂಡು ಇಲಾಖಾ ಕಾರ್ಯದಲ್ಲಿ ಭಯಮುಕ್ತರಾಗಿ ಕಾರ್ಯ ಮಾಡಲು ತುಂಬಾ  ಸಹಕಾರಿಯಾಯಿತು.


# ಮೃತ್ಯುಂಜಯ. ರಾ.ಹಿರೇಮಠ 

Friday, 24 July 2020

10- ಮಕ್ಕಳು ಮನೆಯಲ್ಲಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ಮತ್ತು ಕಾರ್ಯತಂತ್ರ

ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಕಲಿಕೆಗೆ ಹಿಂದೆ ಎಂದೂ ಎದುರಾಗದ ಸಂಕಷ್ಟ ಬಂದಿದೆ ಕಾರಣ covid-19 ಮಹಾಮಾರಿ. ಶಾಲೆಗಳು ಪ್ರಾರಂಭವಾಗದೆ ಮುಂದೆ ಏನು ಎಂಬ ದಾರಿ ಕಾಣದಂತಾಗಿದೆ.ಆದರೆ ಹಾಗೆ ಬಿಡುವುದು ಮಕ್ಕಳ ಭವಿಷ್ಯಕ್ಕೆ ಮಾರಕವಾಗಬಲ್ಲದು ,ಆದ್ದರಿಂದ ನಾವುಗಳು ಮಕ್ಕಳನ್ನು ಹೇಗಾದರೂ ಮಾಡಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ .ಮಕ್ಕಳು ಬಹಳ ದಿನಗಳಿಂದ ಕಲಿಕೆಯಿಂದ ದೂರ ಉಳಿದರೆ ಮುಂದೆ ಆ ವ್ಯವಸ್ಥೆಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ.ಇದರಿಂದ ಸದ್ಯದ ಪರಿಸ್ಥಿತಿಯಲ್ಲಿ ಇರವ ಸ್ಥಿತಿಯಲ್ಲಿ ಮಕ್ಕಳು ಕಲಿಕೆಯಲ್ಲಿ ತೊಡಗಿಕೊಂಡಿರುವಂತೆ ಮಾಡಬೇಕು, ಅದಕ್ಕೆ ಕೆಲವು ಮಾರ್ಗೋಪಾಯ ಮಾಡಿ ಮಕ್ಕಳನ್ನು ಪ್ರೇರೇಪಿಸುವುದು ಅವಶ್ಯಕವಾಗಿದೆ.ಮಕ್ಕಳನ್ನು ಪಾಲಕರನ್ನು ಪ್ರೇರೇಪಿಸಲು ಕೆಲ ತಂತ್ರಗಳನ್ನು ರೂಪಿಸಬೇಕು ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ
೧- ವಾರದಲ್ಲಿ ಒಂದೆರಡು ಬಾರಿ ಫೋನ್ ಮೂಲಕ. ಮಾತನಾಡುವುದು ಕೆಲವು ಕಲಿಕಾ ಕೆಲಸ ನೀಡುವುದು
೨-TV ಗಳಲ್ಲಿ ಬರುವ ಪಾಠಗಳ ಬಗ್ಗೆ ಮಾಹಿತಿ ನೀಡುವುದು.
೩-ಕಲಿಕಾಂಶಗಳ ಬಗಗೆ ಯೋಜನಾ ಕಾರ್ಯ ಕೊಡುವುದು.
೪-ಊರಿನಲ್ಲಿರುವ ಶಾಲೆ ಹಳೆ ವಿದ್ಯಾರ್ಥಿಗಳು ಈಗಿನ ಮಕ್ಕಳಿಗೆ ನೇರವಾಗಲು ಪ್ರೇರೇಪಿಸುವುದು.
೫-ಕೆಲ ಕಾರ್ಯಗಳಿಗೆ ಬಹುಮಾನ ಘೊಷಿಸುವುದು.
೬-ಕೆಲವು ಮಾದರಿ ತಯಾರಿಸುವ ಕಾರ್ಯ ನೀಡುವುದು & ಶಾಲೆ ಪ್ರಾರಂಭವಾದ ನಂತರ ಅವುಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ವಾಗ್ದಾನ ಮಾಡುವುದು.
೭-ದಿನಾಲು ಕೆಲವು ಗಣಿತದ ಮೂಲ ಕ್ರಿಯೆಗಳ ಲೆಕ್ಕ ದಿನಾಂಕ ನಮೂದಿಸಿ ಮಾಡಲು ತಿಳಿಸುವುದು.
8-ನಾವು ಕೆಲ ಕಲಿಕಾಂಶಗಳ video ಮಾಡಿ ಮಕ್ಕಳಿಗೆ ಕಳುಹಿಸುವುದು.
        ಹೀಗೆ ಮಕ್ಕಳು ಕಲಿಕೆಯಿಂದ ವಿಮುಖರಾದದಂತೆ ಸಲಹೆ & ತಂತ್ರಗಳನ್ನು ರೂಪಿಸಿ ಮಗು ನಿರಂತರ ಕಲಿಕೆಯಲ್ಲಿ ತೊಡಗುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಒಟ್ಟಿನಲ್ಲಿ covid ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ನಿರಾತಂಕವಾಗಿ ನಡೆವಂತೆ ಮಾಡಬೇಕು.

ಮೃತ್ಯುಂಜಯ. ರಾ.ಹಿರೇಮಠ 

Monday, 20 July 2020

ಕವನ

           ನೀ  ಅರಿತರೆ.......

ಚಿಪ್ಪೊಂದು ಹರಡಿದೆ ಬಯಸಿ
ಮುತ್ತಾಗಲು ಸ್ವಾತಿ ಮಳೆ ಸುರಿದರೆ
ಹೂವೊಂದು ಅರಳಿದೆ ಬಯಸಿ
ಹಣ್ಣಾಗಲು ದುಂಬಿ ಜೇನಸವಿದರೆ....

ತೇಲಿ ಬರುವ ನಗೆಯ ಹೊನಲು
ತಂಪೆರೆಯುತಿದೆ ಅಳಿಸಿ ಸುಡುಬಿಸಿಲು
ನಿನಗೊಪ್ಪಿತವೆ ತಣಿದು ತಣಿದು ದನಿದರೆ.....

ಹಾಲೊಳಗಿನ ಕೆನೆಯಂತೆ
ನನ್ನೊಳಗೆ  ನೀನು ನಿಂತೆ
ಕಲಕದೆ ನೀ ಕಾಣುವೆ ಹೇಗೆ ತಡೆದರೆ....

ಕನಸಿನಾ ಬಣ್ಣಗಳ ಕಲಿತು
ಬರೆಯುತಿವೆ ನಿನ್ನಯಾ ಗುರುತು
ಮೂಡದಿರೆ ಹೇಗೆ ನನ್ನೊಲುಮೆ ನಿಜವೇ ಆದರೆ...

ಕಾಡೊಳು ಅರಳಿ ಅಳಿದ ಹೂವಂತೆ
ಕಡಲಿನಿಂದೊದ್ಬವಿತ ಮೊಡ ಅಲ್ಲೆ ಸುರಿದಂತೆ
ಯಾವ ಛಲ ಏನು ಫಲ ನೀ ಆಗದಿರೆ ಸೆರೆ...

# ಮೃತ್ಯುಂಜಯ. ಹಿರೇಮಠ 



ಘಟಕ ಯೋಜನೆ