ನಮ್ಮ ಶಾಲೆಯ ಮುಖ್ಯಗುರುಗಳಾದ ಶ್ರೀ ಸಂಗಯ್ಯಾ ರವರ ಜೊತೆ 6,7,8 ನೇ ತರಗತಿಯ ಕೋಣೆಯಲ್ಲಿ computer ಅಳವಡಿಸುವ ಕುರಿತು ಚರ್ಚಿಸಲಾಯಿತು.ಅದರ ಜೊತೆ work from home ಬಗೆಗೆ, ಸೇತುಭಂದ ಪರೀಕ್ಷೆ ತಯಾರಿಯ ಬಗ್ಗೆ ಚರ್ಚಿಸಲಾಹಿತು.
ನಲಿಕಲಿ ವರ್ಗ ನಿರ್ವಹಿಸುತ್ತಿರುವ ಶ್ರೀ ರಮೇಶ ಸರ್ ಮತ್ತು ಶ್ರೀಮತಿ ಗಂಗಾ ರವರ ಜೊತೆ ನಲಿಕಲಿ ವರ್ಗಕೋಣೆಯಲ್ಲಿ ಒಂದು TV ಕುಡಿಸುವ ಕುರಿತು ಮತ್ತು ಅದಕ್ಕೆ ಬೇಕಾಗುವ ಅನುದಾನವನ್ನು ಸಾರ್ವಜನಿಕರಿಂದ ,ಶಿಕ್ಷಣ ಪ್ರೇಮಿಗಳಿಂದ ಸಂಗ್ರಹಿಸುವ ಕುರಿತು ಚರ್ಚಿಸಲಾಯಿತು .ಶ್ರೀ ವೀರಣ್ಣ ವಿಶ್ವಕರ್ಮ ರವರು ಸಾವಿರ ರೂ ನೀಡಿರುವ ಮಾಹಿತಿ ಹಂಚಿಕೊಳ್ಳುಲಾಯಿತು.
ಶ್ರೀಮತಿ ವಿಜಯಲಕ್ಷ್ಮೀ ಸ ಶಿ ರವರ ಜೊತೆ online ತರಬೇತಿ, ಮತ್ತು ಅದರಲ್ಲಿ ಭಾಗವಹಿಸುವ ವಿಧಾನದ ಬಗೆಗೆ ಚರ್ಚಿಸಲಾಯಿತು ಬ್ಲಾಗ್ ತಯಾರಿಸುವ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು.
ಶ್ರೀ ಭೀಮಾಶಂಕರ ಬಾಬಾ ರವರ ಜೊತೆ ಸಮಾಜ ವಿಜ್ಞಾನಕ್ಕೆ ಸಂಬಂದಿಸಿದ ಇರುವ ಕಲಿಕೋಪಕರಣಗಳು, ಚಾರ್ಟ್ ಗಳು &ಅವುಗಳ ಬಳಕೆ ಬಗೆಗೆ ಚರ್ಚಿಸಲಾಯಿತು. ಇದರ ಜೊತೆ ಗ್ರಂಥಾಲಯದ ಬಗ್ಗೆ ಈ ಶೈಕ್ಷಣಿಕ ವರ್ಷದಿಂದ ಏನೆಲ್ಲಾ ಹೊಸತನ ಮಾಡಬೇಕು ಎನ್ನುವುದರ ಬಗೆಗೆ ಚರ್ಚಿಸಲಾಯಿತು.
# ಮೃತ್ಯುಂಜಯ. ರಾ.ಹಿರೇಮಠ
No comments:
Post a Comment